ಪೌರತ್ವ ನೀತಿ

ಯಾರೋ ಒಬ್ಬರೂ ಕೇಳಿದರು ನೀವು ಕಕಿಬಕ ನ ವಿಚಾರದ ಬಗ್ಗೆ ವಾಸ್ತವ ಅಂಶಗಳ ಬಗ್ಗೆ ಭಿನ್ನಾಭಿಪ್ರಾಯ ಇದ್ದರೆ ವ್ಯಕ್ತ ಪಡಿಸಿ ಅಂದರು..ಅದಕ್ಕ ನಾ ಉತ್ತರ ಕೊಡಲಿಲ್ಲ...ಯಾಕೆಂದ್ರ ಕಕಿಬಕ ನಮ್ಮ ನಾಯಕನು ಅಲ್ಲ..ಎರಡನೆದ್ದು..ಅದು ಕಾಯಿದೆ ಆಗಿದೆ...

ನಾವು ಸ್ವತಂತ್ರಾಗಿದ್ದು ಜ್ಯಾತೀತ ತತ್ವದ ನಿಲುವಿನಲ್ಲಿ..ಧರ್ಮದ ಆಧಾರದ ಮೇಲೆ ರಾಷ್ಟ್ರ ಇಭ್ಬಾಗ ಆಗಬೇಕೆಂದವರು ಮುಸ್ಲಿಮ ಲೀಗ ಮತ್ತು ಹಿಂದು ಮಹಾಸಭಾ..ಇದನ್ನು ವಿರೋಧಿಸಿದ್ದು ಮಹತ್ಮಾ ಗಾಂಧಿ ಮತ್ತ ಮೌಲಾನ ಅಝಾದ..ನಮಗೆ ಅವಾಗ ರಾಷ್ಟ್ರೀಯ ಕಲ್ಪನೆ ಅಂದರೆ .. “ವಿವಿಧತೆಯಲ್ಲಿ ಐಕ್ಯತೆ”ಮತ್ತ “ಸರ್ವ ಜನಾಂಗದ ಶಾಂತೀಯ ತೋಟ..” ಆದರೆ ಈಗಿನ ಪೌರತ್ವ ಕಾಯಿದೆ ನಮ್ಮ ದೇಶವನ್ನ ಧಾರ್ಮಿಕ ಪೌರತ್ವದ ತತ್ವದ ಅಡಿಯಲ್ಲಿ ತಳ್ಳುತಿದೆ..ತಳ್ಳಿದೆ.

ವಯಕ್ತಿಕ ವಾಗಿ ನಾನು ಲಿಂಗಾಯತ ಧರ್ಮವನ್ನು ನಂಬಿದ್ದೇನೆ ..ಆದರೆ ಲಿಂಗಾಯತ ಧರ್ಮದ ಉಲ್ಲೇಖವೆ ಇಲ್ಲ ಈ ಕಾಯಿದೆ ಅಲ್ಲಿ..ಈಗ ನಾವು ಯಾರು? ಭಾರತೀಯರೊ ? ವಲಸಿಗರೊ? 

ಪೌರತ್ವ ನೀತಿ ಅನೇಕ ದೇಶಗಳಲ್ಲಿ ಜನ್ಮ ಆಧಾರೀತ ಮತ್ತ ವಾಸದ ಆಧಾರೀತ..ಧರ್ಮ ಆಧಾರೀತ ಪೌರತ್ವ ನೀತಿ ಕೆಲವೆ ದೇಶಗಳಲ್ಲಿ ಇರೋದು.. ಆದರೆ ಅಂತಹ ದೇಶಗಳು ಮುಂದು ವರಿದಿಲ್ಲ ಅಥವಾ ಅಭಿವೃದ್ಧಿ ಹೊಂದಿಲ್ಲ..ಆ ದೇಶಗಳು ಕೂಡಾ ತಮ್ಮ ನಿಲುವನ್ನು ಬದಲಾಯಿಸತ್ತಿವೆ.

ಧರ್ಮ ಆಧಾರೀತ ಪೌರತ್ವ ನೀತಿ ಇದು ಪ್ರಜಾತಂತ್ರದ ಹತ್ಯೆ!
ಹಾಗಾಗಿ ಕಕಿಬನ ಮಾತು ಕೇಳದೆ ತಮ್ಮ ವಿವೇಕವನ್ನು ಉಪಯೋಗಿಸಿ.. ತನ್ನ ತಾ ತಿಳಿದೋಡೆ ಬಿನ್ನಾಣ ವಕ್ಕು ಸರ್ವಜ್ಞ. ಅನ್ನುವ ತತ್ವ ನಂಬಿ..ಬಸವಣ್ಣ ಹೇಳಿದ ಹಾಗೆ ಇವನಾರವ .. ಇವನಾರವ ಎಂದೆನಿಸದಿರಯ್ಯ..ಇವ ನಮ್ಮವ...ಇವ ನಮ್ಮವ  ಎಂದೆನಿಸಯ್ಯ..ಕೂಡಲ ಸಂಗಮದೇವ.

ಪೌರತ್ವ ನೀತಿ ಸಂಶೋದನೆಯ ಅಗತ್ಯ ಎನೀರಬೇಕು? ಸರಕಾರ ಬಹುಮತ ಪಡಿದಿದ್ದರೂ..ತನ್ನ ಕಾರ್ಯ ಮತ್ತು ಪ್ರಣಾಳಿಕೆ ಪತ್ರ ಇಡೆರಸವಲ್ಲಿ ಸೋತು ಸುಣ್ಣಾಗಿದ್ದಾ? ಯವಕರಿಗೆ ನೌಕರಿ ಸೃಷ್ಟಿ ಮಾಡಲು ಸೋತಿದ್ದಾ? ಉಳ್ಳಾಗಡ್ಡಿ 200 ರೂಪಾಯಿ ಕಿಲೊ ಆಗಿದ್ದಾ? ಅಥವಾ ಭಾವನತ್ಮಕ ನಿರ್ಧಾರವ?

ನಾವು ಬಹುತ್ವವನ್ನು ನಂಬಿ ಸ್ವಾತಂತ್ರ್ಯ ಪಡೆದು ಎಕತ್ವದೇಡೆಗೆಹೊರಟಿದ್ದು ಯಾಕೆ? ಮುಸ್ಲಿಮ ವಿರೋಧಿ ತತ್ವ ನಿಮಗೆ ಬಹುಮತ ಬಂದಿದೆ ಅಂತ ನೀವು ಅಂಬೇಡ್ಕರ ಬರೆದ ಸಂವೀದಾನಕ್ಕ ಅಥವಾ ಅದರ ಮೂಲ ತತ್ವಕ್ಕ ಬೆಂಕಿ ಹಚ್ಚತೀರಿ?

ಉಳ್ಳಾಗಡ್ಡಿ ಬೆಲೆ ನಿಯಂತ್ರಣ ಮಾಡಲಾರದ ನಿಶಕ್ತ ಸರಕಾರ ಜನರ ಭಾವನೆ ಜೊತೆ ಆಟ ಆಡಿ ಅವಕ್ಕ ಮಬ್ಬ ಭಕ್ತರ ಮಾಡಿರಿ. ಧರ್ಮಾಂಧತೆಯ ಅಮಲ ಎರಸಿ ವಿಕಾಸ ಅನ್ನದುನ್ನ ಹದಗೆಡಸಿ ಬಿಟ್ಟಿರಿ. ಆದರು ಎಲ್ಲಾ ಸಮಾಜೀಕ ಮುಖ್ಯ ವಾಹಿನಿಗಳು ಅಂಗಿ ಹರಕೊಂಡು ನಿಮ್ಮ ಪ್ರಚಾರಕ ನಿಂತಾವ ಖೊಡಿಗೊಳು. ಇಂತಹ ಸ್ಥಿಥಿಯೊಳಗ ನೀವು ಎನೆ ತಂದರು ಮಬ್ಬ ಸಂಸತ ಸದಸ್ಯರು ಒಪ್ಪತವ, ಮುಖ್ಯ ವಾಹಿನಿಗಳು ಮಾಸ್ಟರ ಸ್ಟ್ರೊಕ ಅಂತ ಹೊಯೊಕೊಂಡು ನೊಟನ್ಯಾಗ ಜಿಪಿಎಸ್ ಚಿಪ ಅಯಿತಿ ಅಂತ ಹೇಳತಾವ ಅದಕ್ಕ ಕಕಿಬಕ ಒಂದು ವಿಡಿಯೊ ಮಾಡಿ ಪುಂಗಿ ಉದತಾನ ಅದನ್ನ ನೀವು ಶೇರ ಮಾಡಿ ಅಂವ ವಾಸ್ತವ ಮಾತಾಡ್ತನ ಅದಕ್ಕ ನೀ ಫ್ಯಾಕ್ಟಸ ಫೀಗರ ಕೊಡರಿ ಅಂತ ಸಾಮನ್ಯ ಜನರಿಗೆ ಕೇಳಕೊತ ತಿರಗ್ಯಾಡರಿ.

ನಮ್ಮ ಸ್ವಾತಂತ್ರ್ಯ ತಂದೋರು ಮಬ್ಬರು ಈಗಿನ ಮಬ್ಬ ಭಕ್ತರ ಲೆಕ್ಕದಾಗ ಈ ಮಬ್ರ ದೇವರ ಶಿವ ಮತ್ತ ವಿಷ್ಣು ಅವತಾರ ಮೊದಿ

ಇಂತಿ ನಿಮ್ಮ,
ಬಸವ ಪಾಟೀಲ
www.about.me/bjapatil 







Comments

Popular Posts